ಬಾರ್ಕರ್, ಅರ್ನೆಸ್ಟ್
1874-1960. ಇತಿಹಾಸ ಮತ್ತು ರಾಜಕೀಯ ತಜ್ಞ, ಸಾಹಿತಿ ಮತ್ತು ಅಧ್ಯಾಪಕ. ನಿರಂಕುಶ ಪರಮಾಧಿಕಾರವನ್ನು ವಿರೋಧಿಸಿದವರ ಪೈಕಿ ಒಬ್ಬ. ಬಾರ್ಕರ್ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ ಅಲ್ಲೇ ಅಧ್ಯಾಪಕ ವೃತ್ತಿ ಕೈಗೊಂಡ (18998-1920). ಅನಂತರ ಲಂಡನ್ನಿನ ಕಿಂಗ್ಸ್ ಕಾಲೇಜಿನ ಪ್ರಾಂಶುಪಾಲಕನಾಗಿ (1920-27) ಕಾರ್ಯ ನಿರ್ವಹಿಸಿದ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ (1928-30) ರಾಜಕೀಯಶಾಸ್ತ್ರದ ಮುಖ್ಯಸ್ಥನಾಗಿ ಕೆಲಸಮಾಡಿ ಹೆಸರು ಗಳಿಸಿದ. ರಾಜಕೀಯ ಇತಿಹಾಸ ಕುರಿತು ಖಚಿತವಾಗಿ ನಿರ್ದಿಷ್ಟವಾಗಿ ಮಾತನಾಡುವ ಮತ್ತು ಬರೆಯುವುದರಲ್ಲಿ ಬಾರ್ಕರ್ ಹೆಸರು ಅಗ್ರಸ್ಥಾನ ಗಳಿಸಿತು. ಈತನ ಕೃತಿಗಳಲ್ಲಿ ಪೊಲಿಟಿಕಲ್ ಥಾಟ್ ಇನ್ ಇಂಗ್ಲೆಂಡ್ ಫ್ರಮ್ ಹರ್ಬರ್ಟ್ ಸ್ಪೆನ್ಸ್‍ರ್ ಟು ಟುಡೇ (1915). ಗ್ರೀಕ್ ಪೊಲಿಟಿಕಲ್ ಥಿಯರಿ (1918), ದಿ ಕ್ರುಸೇಡ್ಸ್ (1923), ಚರ್ಚ್, ಸ್ಟೇಟ್, ಅಂಡ್ ಸ್ಟಡಿ ಪ್ರಬಂಧಗಳು. (1930), ಆಲಿವರ್ ಕ್ರಾಮ್‍ವೆಲ್ ಅಂಡ್ ದಿ ಇಂಗ್ಲೀಷ್ ಪೀಪಲ್ (1937), ಐಡಿಯಾಸ್ ಅಂಡ್ ಐಡಿಯಲ್ಸ್ ಆಫ್ ದಿ ಬ್ರಿಟಿಷ್ ಎಂಪೈರ್ (1941) ಇವು ಹೆಚ್ಚು ಜನಪ್ರಿಯವಾದವು. 								(ಎಂ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ